Tuesday, September 26, 2006

ಕಗ್ಗಪ್ಪು ಹೆದ್ದಾರಿಯ ಬಯಲು ತಂಗಾಳಿಗೆ

ಕಗ್ಗಪ್ಪು ಹೆದ್ದಾರಿಯ ಬಯಲು ತಂಗಾಳಿಗೆ
ಕುಣಿದಾಡಿವೆ ನಿನ್ನ ಮುಂಗುರುಳು
ಭತ್ತದ ಗದ್ದೆಗಳ ಬೆಚ್ಚನೆಯ ಕಂಪು
ದೂರದಲ್ಲೆಲ್ಲೋ ವಾಹನಗಳ ಮಿಣುಕು
ಜಾರುತ್ತಿದೆ ಭೂಮಿಗೆ ಇರುಳು

ಕಿಡಿಕೆಂಡದಂತೆ ಕಾಣುವ ಸೂರ್ಯ
ಬೈಗಿನ ಮಂದ ಬೆಳಕಿನಲ್ಲಿ ತಣ್ಣಗೆ ನಿಂತ ಬೈಕು
ಆಗಸದಲ್ಲಿ ಅಂಡಲೆಯುವ ಮೋಡದ ಸಾಲು
ದಿಗಂತದಲ್ಲೆಲ್ಲೊ ಮತ್ತೆ ಹುಟ್ಟಲಣಿಯಾಗುವ ದಿನಕರ
ಸ್ವರ್ಗವೋ ಭೂಮಿಯೋ ಮನಸ್ಸಿನ ತುಂಬ ಹಾಯಿಕು!

ಮಣ್ಣಿನ ವಾಸನೆಯನ್ನು ಹಿಡಿಯಲಂಜುವ
ಪ್ಲಾಸ್ಟಿಕ್ ಮನಸ್ಸುಗಳನ್ನು ದೂರತಳ್ಳಿ ಬಂದಿದ್ದೇನೆ
ನನ್ನ ಹೃದಯದೋರಿದ ದಾರಿಗೆ
ಅಪ್ಪುತ್ತದೆ ದೇಹ ಹಸಿರು ನೆಲವನ್ನು!
ಅಪ್ಪುತ್ತದೆ ಮನಸ್ಸು ಭಾಷೆಯನು ಮೀರಿದ ಭಾವನೆಗಳನ್ನು,
ಮನಸ್ಸಿನ ಕಾಲದ ಮೂಲೆಯಲ್ಲಿರುವ ನಿನ್ನ ನೆನಪುಗಳನನ್ನು!
ಏಕಾಂತದ ಅಚ್ಚರಿಯನ್ನು!

ಪ್ರಸನ್ನ ಕುಮಾರ ರೇ