ಚಾಚಿದ ಹವಳದ ಬೆರಳುಗಳು
ಗಾಳಿಗೆ ಒದೆಯುವ ಎಳೆ ಸಂಪಿಗೆಯ ಪಾದ
ಹೊಳೆಯುವ ಕಪ್ಪು ರಾತ್ರಿಯಂಥ ಕಣ್ಣುಗಳಿಂದ
ಇಣುಕಿದ್ದು ಬೆಳದಿಂಗಳಿನ ಆಪ್ತತೆ
ದಿಗಂತದ ಬೊಟ್ಟಿನಂತ ದಿಟ್ಟ ನೋಟ
ಮಲ್ಲಿಗೆಯ ದಂಡೆಯಂಥಾ
ಹಾತೊರೆಯುವ ಬಾಹುಗಳು
ಜೇನಿನ ಕೆನ್ನೆಗಳಿಂದ ಜಾರಿ ಬಂದ
ಪುಟ್ಟ ಕೇಕೆ ಕಿವಿಗೆ ಸಿಹಿ ಸುರಿದಂತೆ
ತಾವರೆ ಎಸಳಿನಂಥ ತುಟಿಗಳಿಂದ
ಚಾಚಿದ ಮುಗ್ಧ ನಗುವ ಕಂಡ ಕಣ್ಣು
ಕಾಣುವ ಕನಸೆಲ್ಲವೂ ಗುಲಾಬಿಯೇ!
ಆ ನನಸಾದ ಕನಸಿನ ಹೆಸರೇ ಸನ್ಮಯ!
-ಪ್ರಸನ್ನ
ಗಾಳಿಗೆ ಒದೆಯುವ ಎಳೆ ಸಂಪಿಗೆಯ ಪಾದ
ಹೊಳೆಯುವ ಕಪ್ಪು ರಾತ್ರಿಯಂಥ ಕಣ್ಣುಗಳಿಂದ
ಇಣುಕಿದ್ದು ಬೆಳದಿಂಗಳಿನ ಆಪ್ತತೆ
ದಿಗಂತದ ಬೊಟ್ಟಿನಂತ ದಿಟ್ಟ ನೋಟ
ಮಲ್ಲಿಗೆಯ ದಂಡೆಯಂಥಾ
ಹಾತೊರೆಯುವ ಬಾಹುಗಳು
ಜೇನಿನ ಕೆನ್ನೆಗಳಿಂದ ಜಾರಿ ಬಂದ
ಪುಟ್ಟ ಕೇಕೆ ಕಿವಿಗೆ ಸಿಹಿ ಸುರಿದಂತೆ
ತಾವರೆ ಎಸಳಿನಂಥ ತುಟಿಗಳಿಂದ
ಚಾಚಿದ ಮುಗ್ಧ ನಗುವ ಕಂಡ ಕಣ್ಣು
ಕಾಣುವ ಕನಸೆಲ್ಲವೂ ಗುಲಾಬಿಯೇ!
ಆ ನನಸಾದ ಕನಸಿನ ಹೆಸರೇ ಸನ್ಮಯ!
-ಪ್ರಸನ್ನ