ಬರೆಯಲಾಗದ ಕವಿತೆ
ಕದ್ದು ನೋಡಿದ ಕನಸು
ಬಿದ್ದರೂ ಬದಲಾಗದ ರೂಪ
ಎದ್ದೆದ್ದು ಓಡುತ್ತಿರುವ ಬದುಕು
ಯಂತ್ರಗಳ ಸ್ನಿಗ್ಧತೆಯಲ್ಲಿ
ದೂರ ದೂರ ಸೂರ್ಯನ ಬೆಳಕು
ಕನ್ನಡಿಯೊಳಗಿನ ಮಾಯೆಯ ಥಳಕು
ಭದ್ರವಾಗಿದ್ದೂ ಬಳುಕುವ ಬದುಕು
ನಿರಂತರ ಬೀಸುವ ಬೆಳಕಿನ ಗಾಳಿ
ಸುಯ್ಯನೆ ಹುಯ್ದು ಬೆಚ್ಚಗಾಗಿಸುವ ಮಳೆ
ಅಚ್ಚ ಹಸುರಿನ ಕನಸುಗಳ ಮಧ್ಯೆ
ಹಣ್ಣು ಹಣ್ಣು ಮನಸು!
-ಪ್ರಸನ್ನ ರೇವಣ್ಣ