ಒಂದೇ ಕಣ್ಣೀರು, ಒಂದು ಅಪ್ಪುಗೆ
ನನ್ನ ಕಣ್ಣೀರುಗಳು ಬಿದ್ದ ಹೊತ್ತಿಗೆ
ಜಗದಗಲ ಬಿದ್ದ ಎಲ್ಲ ಕಣ್ಣೀರುಗಳೂ ನನ್ನವೇ
ಸಮುದ್ರದಂತೆ ಉಕ್ಕಿದ ನನ್ನ ನಗುವಿನ ಹೊತ್ತಿನಲ್ಲಿ
ಹೂವಿನಂತೆ ಅರಳಿದ ನಗುಮೊಗಗಳೆಲ್ಲ ನನ್ನವೇ
ನಾನು ಬಿಗಿದಪ್ಪಿ ನಿಟ್ಟುಸಿರೆಳೆದ ಘಳಿಗೆಯಲ್ಲಿನ
ಅಷ್ಟೂ ಅಪ್ಪುಗೆಗಳಲ್ಲಿನ ಬೆಚ್ಚಗಿನ ಆಪ್ತತೆ ನನ್ನದೇ
ಯಾವುದೇ ತತ್ವ, ಚಳುವಳಿ, ಅನುಬಂಧ
ಇತ್ಯಾದಿ ಮಾರ್ಗದರ್ಶನವಿಲ್ಲದ
ಅರಿವೆಯೂ ಇಲ್ಲದ ಪ್ರೇಮಿಕ ಮುಗ್ಧತೆಗೆ
ಹಾತೊರೆಯುವ, ನಿಯಮಗಳನ್ನು ಮುರಿಯುವ
ವಿಶ್ವದ ಜೀವ ಸಂಗಾತಿಗಳಲ್ಲಿನ ಕ್ರಾಂತಿಯನ್ನು
ಪ್ರೀತಿಸುವ ಅನುಭವಗಳೆಲ್ಲವೂ ನನ್ನವೇ!
ಪ್ರಸನ್ನ
No comments:
Post a Comment